ಕರಗದ ಮಾಹಿತಿ

ಶತಮಾನಗಳ ಇತಿಹಾಸ ಹೊಂದಿರುವ ವಿಶ್ವ ಪ್ರಸಿದ್ಧ  ಬೆಂಗಳೂರು ಕರಗಕ್ಕೆ ತನ್ನದೇ ಆದ ವೈಶಿಷ್ಟ್ಯವಿದೆ. ಆದಿಶಕ್ತಿಯನ್ನು ಗುರುತಿಸಿ ಆರಾಧಿಸುವ ಹಲವಾರು ಸಂಪ್ರದಾಯಗಳಲ್ಲಿ ಕರಗ ಮಹೋತ್ಸವವೂ ಒಂದು. ಕರಗ(ಕರಕ) ಎಂಬ ಮಾತಿಗೆ 'ಕುಂಭ' ಎಂಬ ಅರ್ಥ ಇದೆ. ಶತಮಾನಗಳ ಇತಿಹಾಸ ಹೊಂದಿರುವ ಬೆಂಗಳೂರು ಕರಗಕ್ಕೆ ತನ್ನದೇ ಆದ ವೈಶಿಷ್ಟ್ಯವಿದೆ. ಕರಗದ ಒಂದೊಂದು ಅಕ್ಷರವೂ ಒಂದೊಂದು ಸಂಕೇತವನ್ನು ಹೊಂದಿವೆ ಎನ್ನುವ ಪ್ರತೀತಿ ಇದೆ. ಕ-ಕೈಯಿಂದ ಮುಟ್ಟದೆ, ರ-ರುಂಡದ ಮೇಲೆ ಧರಿಸಿ, ಗ-ಗತಿಸುವುದು (ತಿರುಗುವುದು) ಎಂಬ ಅರ್ಥ ವಿವರಣೆ ಬಳಕೆಯಲ್ಲಿದೆ. ಕರಗ  ಪೂಜೆ ಮತ್ತು ಉತ್ಸವಗಳು ತಮಿಳುನಾಡಿನಲ್ಲಿ ಬಹು ಹಿಂದಿನಿಂದಲೂ ವೈಭವದಿಂದ ಆಚರಿಸಲ್ಪಡುತ್ತಿದೆ. ಕರ್ನಾಟಕ ರಾಜ್ಯದ ಬೆಂಗಳೂರು, ಕೋಲಾರ ಜಿಲ್ಲೆಯ ಕೆಲವು ಭಾಗಗಳಲ್ಲಿ ಈ ಆಚರಣೆ ರೂಢಿಯಲ್ಲಿದೆ. ಬೆಂಗಳೂರಿನ ಕರಗ ಪ್ರಸಿದ್ಧಿಯಾಗಿದೆ.
ಆಚರಣೆ ಹಿನ್ನಲೆ:
            ವಹ್ನಿಕುಲ ಕ್ಷತ್ರಿಯ ( ತಿಗಳ) ಜನಗಂಗಾದವರು ಮಹಾಭಾರತ ಕಥಾನಾಯಕಿಯಾದ ದ್ರೌಪದಿಯನ್ನು ಅಗ್ನಿಯಿಂದ ಉದಯಿಸಿ ಬಂದ ಆದಿಶಕ್ತಿಯೆಂದು ತಾವುಗಳು ಆಕೆಯ ಮಾನಸ ಪುತ್ರರೆಂದು ದೃಢವಾಗಿ ನಂಬಿ ಶ್ರದ್ಧಾಭಕ್ತಿಯಿಂದ ಆಕೆಯನ್ನು ಆರಾಧಿಸುತ್ತಾರೆ . ಮಹಾಭಾರತದ ಸ್ವರ್ಗಾರೋಹಣ ಪರ್ವದಲ್ಲಿ ಪಾಂಡವರು ರಾಜ್ಯ ಆಡಳಿತವನ್ನು ಮುಗಿಸಿ ಧಾರ್ಮಿಕ ವಿಧಿವಿಧಾನಗಳನ್ನು, ಯಜ್ಞ ಯಾಗಾಧಿಗಳನ್ನು, ಪೂರೈಸಿ ಶ್ವೇತವಸ್ತ್ರಧಾರಿಗಳಾಗಿ ದ್ರೌಪದಿ ಸಮೇತ ಸ್ವರ್ಗದ ದಾರಿಹಿಡಿದು ನಿಷ್ಚಿಂತೆಯಿಂದ ಸಾಗುತಿದ್ದ ಪಾಂಡವರು ಮುಂದೆ ಮುಂದೆ ಸಾಗುತ್ತಿರಬೇಕಾದರೆ ದ್ರೌಪದಿಯು ತನ್ನ ಭೂಲೋಕದ ಅನುಭವಗಳನ್ನು ಚಿಂತಿಸುತ್ತಾ ಧಾರೆಯಲ್ಲಿ ರಕ್ಕಸರ ಪಡೆಯೇ ನಿರ್ಮಾಣವಾಗಿದ್ದರೂ ವನವಾಸ ಕಾಲದಲ್ಲಿ ಕಾಣಿಸಿಕೊಂಡಿದ್ದ ತಿಮಿರಾಸುರನ ಸಂಹಾರದ ಬಗ್ಗೆ ಚಿಂತಿಸುತ್ತಾ ನಡುಗೆಯ ದಾರಿಯಲ್ಲಿ ಹಿಂದಿರುತ್ತಾಳೆ. ಈ ಸಮಯನ್ನು ಕಾಯುತ್ತಿದ್ದ ತಿಮಿರಾಸುರನು ದ್ರೌಪತಿಯನ್ನು ಅಡ್ಡಗಟ್ಟಿ ಈ ಧಾರೆಯಲ್ಲೇ ಸುರದ್ರೂಪಿಯಾದ ನೀನು ಪಾಂಡವರನ್ನು ಕಟ್ಟಿಕೊಂಡು ಪಟ್ಟ ಕಷ್ಟಕಾರ್ಪಣ್ಯಗಳನ್ನು ಅರಿತ್ತಿದ್ದೇನೆ ಇನ್ನು ಮುಂದೆಯಾದರೂ ನನ್ನೊಡನೆ ಇಹಲೋಕದಲ್ಲಿ ಸುಖವನ್ನು ಅನುಭವಿಸು. ತದನಂತರ ನೀನು ಇಷ್ಟಪಟ್ಟಲ್ಲಿ ನೇರವಾಗಿ ಸ್ವರ್ಗಕ್ಕೆ ವಿಮಾನದಲ್ಲಿ ನಾನೆಕೆರೆದೊಯ್ಯುತ್ತೇನೆ ಎಂದಲ್ಲ ಪ್ರಲಾಪಿಸುತ್ತಾನೆ. ದ್ರೌಪದಿಯು ಅವನಿಗೆ ಹೇಳಿದ ಬುದ್ಧಿವಾದಗಳು ಸನ್ಮಾರ್ಗದಲ್ಲಿ ನಡೆಯಲು ನೀಡಿದ ಸಲಹೆಗಳು ತಿಮಿರಾಸುರನಿಗೆ ಅಪತ್ಯಗಳಾದವು ಕೊನೆಗೆ ಅವನ ಕೀಟಲೆಗಳಿಂದ ಬೇಸತ್ತ ದ್ರೌಪದಿಯು ಶ್ರೀ ಕೃಷ್ಣಾಸ್ಮರಣೆ ಮಾಡಲಾಗಿ ಶ್ರೀ ಕೃಷ್ಣಾ ದ್ರೌಪದಿಯನ್ನು ಸಂತೈಯಿಸಿ ನಾನು ನಿನ್ನಿಂದ ಬಹುದೂರವಿದ್ದೇನೆ ಪಾಂಡವರು ಮುಂದೆ ಸಾಗಿರುವರು ಹಿಂದುರುಗಿ ಬರಲಾರರು ನಿನ್ನ ಹಿಂದಿನ ಸಾಮರ್ಥ್ಯಗಳನ್ನು ಜ್ಞಾಪಿಸಿಕೋ. ತಿಮಿರಾಸುರನ ಸಂಹಾರ ಮಾಡುವ ಶಕ್ತಿ ನಿನ್ನಲ್ಲಿಯೇ ಇದೆ ಎಂದು ಎಚ್ಚರಿಸುತ್ತಾನೆ. ಆಗ ದ್ರೌಪದಿ ವಿಶ್ವರೂಪವನ್ನು ತಳೆದು ತಲೆಯಿಂದ ಯಜಮಾನನೂ, ಹಣೆಯಿಂದ ಗಣಾಚಾರಿಯನ್ನು, ಬಾಯಿಂದ ಗಂಟೆಪೂಜಾರಿಯನ್ನು, ಕಿವಿಯಿಂದ ಗೌಡರನ್ನು, ತೋಳುಗಳಿಂದ ವೀರಕುಮಾರರನ್ನು ಸೃಷ್ಟಿಸಿ ವ್ಯೂಹವನ್ನು ರಚಿಸಿ ತಿಮಿರಾಸುರನ ಮೇಲೆ ಯುದ್ಧವನ್ನು ಹೂಡಿ ತಿಮಿರಾಸುರನನ್ನು ಮತ್ತು ಬೆಂಬಲಿಸಿ ಬಂದ ರಕ್ಕಸ ಪಡೆಯನ್ನು ಸಂಹಾರ ಮಾಡಿ ತನ್ನ ಇಹ ಲೋಕದ ಕರ್ತವ್ಯವನ್ನು ಮುಗಿಸಿ ಸ್ವರ್ಗದ ಹಾದಿಯನ್ನು ಹಿಡಿದು ಹೊರಡುತ್ತಾಳೆ.
                        ಗಣಾಚಾರಿ, ಗಂಟೆಪೂಜಾರಿಯಾದ ವೀರಕುಮಾರರು ತಮ್ಮ ಮುಂದಿನ ದಾರಿಯೆನೆಂದು ದಿಕ್ಕುಕಾಣದೆ ಗೋವಿಂದನ ನಾಮಸ್ಮರಣೆ ಮಾಡುತ್ತಾರೆ. ಶ್ರೀ ಕೃಷ್ಣನು ಇವರಿಗೆ ಕಾಣಿಸಿಕೊಂಡು ನಿಮ್ಮ ಬದುಕು ನಿಮ್ಮ ತಾಯಿಯೇ ದಾರಿಕಾಣಿಸಬೇಕು. ಆಕೆಯನ್ನು ಧ್ಯಾನಿಸಿ ಎಂದು ಸಲಹೆ ನೀಡಿ ಅಂತರ್ಧಾನನಾಗುತ್ತಾನೆ. ಈ ಸ್ಥಿತಿಯಲ್ಲಿ ದಿಕ್ಕು ತೋರದೆ ಗಣಾಚಾರಿ, ಗಂಟೆಪೂಜಾರಿಗಳು ದೇವಿಯನ್ನು ಧ್ಯಾನಿಸತೊಡಗುತ್ತಾರೆ. ವೀರಕುಮಾರರು ತಮ್ಮ ಖಡ್ಗಗಳನ್ನು ತಮ್ಮ ಎದೆಯ ಮೇಲೆ ಬಲವಾಗಿ ಆಯಿಸುತ್ತ ಆತ್ಮಾಹುತಿಗೆ ಮುಂದಾಗುತ್ತಾರೆ. ಈ ಆಕ್ರಂದನಕ್ಕೆ ಮನಕರಗಿದ ದೇವಿ ತನ್ನ ಮಾನಸ ಪುತ್ರರನ್ನು ಸಂತೈಸುತ್ತಾ, ನಾನು ಈ ಧರೆಗೆ ಬಂಡ ಕಾರ್ಯವು ಮುಗಿದಿರುತ್ತದೆ. ನಾನು ನಿಮ್ಮೊಂದಿಗೆ ಉಳಿಯಲು ಸಾಧ್ಯವಿಲ್ಲಾ ನೀವುಗಳು ಧರ್ಮಯಿಂದ ಕ್ಷತ್ರಿಯರಾಗಿ ಈ ಧಾರೆಯಲ್ಲಿ ಆಳ್ವಿಕೆ ನಡೆಸಿರಿ ಧರ್ಮವನ್ನು ಕಾಪಾಡುವುದು ಸ್ತ್ರೀ ರಕ್ಷಣೆ, ಗೋರಕ್ಷಣೆ ನಿಮ್ಮ ಅದ್ಯಾಕರ್ತ್ಯವಾಗಲಿ ವರ್ಷಕ್ಕೊಮ್ಮೆ ಧರೆಗೆ ಬಂದು ಮೂರು ದಿನಗಳ ಕಾಲ ನಿಮ್ಮೊಂದಿಗೆ ಇರುತ್ತೇನೆ ಎಂದು ವಚನವಿತ್ತು ಅಂತದ್ರಾನಳಾಗುತ್ತಾಳೆ. ಅಂತೆಯೇ ವಹ್ನಿಕುಲ ಕ್ಷತ್ರಿಯ ಜನಾಂಗವು ಆದಿಶಕ್ತಿ ದ್ರೌಪದಿ ದೇವಿಯ ಮಾನಸ ಪುತ್ರರೆಂದು ವರ್ಷಕ್ಕೊಮ್ಮೆ ಅದೇವಿಯು ಧರೆಗೆ ಬರುತ್ತಾಳೆಂದು, ಮೂರು ದಿನಗಳ ಕಾಲ ಆ ದೇವಿಯ ಸೇವೆ ಮಾಡುವ ಭಾಗ್ಯ ನಮ್ಮದಾಗಿರುತ್ತದೆ ಎಂತಲೂ ದೃಢವಾಗಿ ನಂಬಿ ಚೈತ್ರ ಮಾಸದ ತ್ರಯೋದಶಿಯ ದಿನ ನೀರಿನ ದಡದಲ್ಲಿ ಆಕೆಯನ್ನು ಆರಾಧಿಸಿ ಆಹ್ವಾನಿಸಿ ಹಾಸಿಕರಾಗದ ರೂಪದಲ್ಲಿ ಗುಡಿತುಂಬಿಸಿಕೊಳ್ಳುವುದು ಚತುರ್ದಶಿಯ ದಿನ ಪುರಾಣ ಕಥನಗಳನ್ನು ನಡೆಸಿ ಫೋನ್ಗಳು ನೈವಿದ್ಯವನ್ನು ಸಮರ್ಪಿಸಿ ಅದಧಿಸುತ್ತ. ಚೈತ್ರ ಪೌರ್ಣಮಿಯದಿನ ಕಾರಗಶಕ್ತಿಯನ್ನು ಆರಾಧಿಸಿ ಸಿಂಗರಿಸಿ ಪೂಜಾರಿಯು ಕಾರಗಶಕ್ತಿಯನ್ನು ಶ್ರದ್ಧಾಭಕ್ತಿಯಿಂದ ಶಿರದಲ್ಲಿ ಧರಿಸಿ ಭಕ್ತರಿಗೆ ದರ್ಶನ ನೀಡುವ ಆಚರಣೆಯೇ ಕಾರಾಗಾಶಕ್ತ್ಯೋತ್ಸವದ ಹಿನ್ನಲೆ ಆಗಿರುತ್ತದೆ.

ಕರಗ ಹಬ್ಬದ ಆಚರಣೆ:
                    ಕರಗ ಹಬ್ಬದ ಆಚರಣೆ ಹಿಂದೂ ತೂಗುತೇದಿಯ(ಕ್ಯಾಲೆಂಡರ್‍) ಮೊದಲ ತಿಂಗಳ ಸಪ್ತಮಿ ಇಂದ ಶುರುವಾಗಿ ಹನ್ನೊಂದು ದಿನಗಳ ಕಾಲ ನಡೆಯುತ್ತದೆ. ಆ 11 ದಿನಗಳ ಗಡುವಿನಲ್ಲಿ, 3 ದಿನಗಳ ಕಾಲ ತಾಯಿ ದ್ರೌಪದಿ ತಮ್ಮೊಡನೆ ಇರುತ್ತಾಳೆಂದು ತಿಗಳರ ನಂಬಿಕೆ. ಬೆಂಗಳೂರಿನ ತಿಗಳರ ಪೇಟೆಯಲ್ಲಿರುವ ಧರ್ಮರಾಯ ಸ್ವಾಮಿ ಗುಡಿಯಲ್ಲಿ ಹಬ್ಬದ ಚಟುವಟಿಕೆಗಳು ನಡೆಯುತ್ತವೆ. ಹನ್ನೊಂದು ದಿನಗಳ ಸಡಗರದಲ್ಲಿ ಕಾರ‍್ಯಕ್ರಮಗಳು ಹೀಗಿರುತ್ತವೆ:

ಉತ್ಸವದ ಮೊದಲ ದಿನವಾದ ಅಂದು ಹಳದಿ ಬಣ್ಣದ ಬಾವುಟವೊಂದನ್ನು ಗುಡಿಯ ಅಂಗಳದೊಳಗೆ, ಬೆಂಗಳೂರು ದಕ್ಷಿಣ ತಾಲ್ಲೂಕು ಜರಗನಹಳ್ಳಿ ಗ್ರಾಮದ ಕುಲಸ್ಥರು ಆಯಾಸಲಿನ ಹಿಂದಿನ ವರ್ಷದಲ್ಲಿ ಕಂಕಣ ಕಟ್ಟಿ ರಕ್ಷಿಸಿದ ೪೫ ಅಡಿ ಎತ್ತರದ ಬಿದಿರಿನ ಕಂಬವನ್ನು ಪೂಜಿಸಿ ಕಡೆದು ಭಕ್ತಿಪೂರ್ವಕವಾಗಿ ಸಾಗಿಸಿಕೊಂಡು ಬಂದು ದೇವಸ್ಥಾನಕ್ಕೆ ಸಮರ್ಪಿಸಿದ ಕಂಬದ ಮೇಲೆ ಹಾರಿಸಲಾಗುತ್ತದೆ. ಅದರಿಂದ ಕರಗ ಉತ್ಸವಕ್ಕೆ ಚಾಲನೆ ನೀಡಲಾಗುತ್ತದೆ. ಗಣಾಚಾರಿಗಳು, ಗಂಟೆಪೂಜಾರಿಗಳು, ವೀರಕುಮಾರರು ಮತ್ತು ಕರಗವನ್ನು ಹೊರುವವರು, ಉತ್ಸವಕ್ಕೆ ಯಾವ ತಡೆಯೂ ಇಲ್ಲದೆ ನಡೆಸಲು ಪಣ ತೊಟ್ಟು ದಾರವೊಂದನ್ನು(ಕಂಕಣ) ತಮ್ಮ ಕಯ್ಯಿಗೆ ಕಟ್ಟಿಕೊಂಡು, ಒಂದು ದಾರವನ್ನು ಬಾವುಟ ಕಂಬಕ್ಕೂ ಕಟ್ಟುವರು. ಬೆಳಗಿನ ಜಾವಾ ಭಕ್ತಿಗಳೆಲ್ಲ ಸೇರಿ ಗೋವಿಂದನ ನಾಮಸ್ಮರಣೆಯೊಂದಿಗೆ ದ್ವಜಾರೋಹಣ ನೆರವೇರಿಸಲಾಗುವುದು ಈ ದಿನವನ್ನು ಧ್ವಜಹೊರಹಾನಾ ದಿನವೆಂದು ಗುರುತಿಸಿಕೊಂಡು ಕರಗೊತ್ತ್ಯೋತ್ಸವ ಪ್ರಾರಂಭಗೊಳ್ಳುವ ಸಂಕೇತ.

ಈ ಜನಾಂಗದ ಪ್ರತಿಯೊಬ್ಬರೂ ಈ ಒಂಭಂತ್ತು ದಿನಗಳು ಮನೆಯಲ್ಲಿ ಶುದ್ಧಿಕಾರ್ಯ ಮುಗಿಸಿ ಹಳೆಯ ಅಡುಗೆ ಸಾಮಾನುಗಳನ್ನು ಬದಿಗಿಟ್ಟು ಹೊಸ ಮಡಿಕೆ ಪತ್ರೆ ಪಧಾರ್ತಗಳನ್ನು ಬಳಸಿ ಶುದ್ಧ ಶಾಖಾಹಾರಿಗಳಾಗಿ ಅಡುಗೆಯನ್ನು ತಯಾರಿಸಿ ನೆಲದ ಮೇಲೆ ಕೂತು ಎಲೆಗಳ ಮೇಲೆ ಊಟ ಮಾಡುವುದು ಪದ್ದತಿಯಾಗಿರುತ್ತದೆ. ಈ ದಿನಗಳಲ್ಲಿ ಮಾಂಸಾಹಾರ ಮಧ್ಯಪಾನ, ಧೂಮಪಾನ ಸೇವಿಸದೇ ಹೊರಗೆ ತಯಾರಿಸಿದ ಪಧಾರ್ಥವನ್ನು ಸೇವಿಸದೇ ಮಡಿಯಲ್ಲಿ ತಯಾರಿಸಿದ ಒಪ್ಪತ್ತಿನ ಆಹಾರ ಸೇವಿಸುವುದು ವಾಡಿಕೆಯಲ್ಲಿದೆ. ಈ ನಿಯಮವು ಅರ್ಚಕರಿಂದ ಹಿಡಿದು ಚಾಕರಿದಾದರೂ ಪಾಲಿಸುತ್ತಾರೆ.

ಇದು ಕರಗ ಹಬ್ಬದ ಆರನೇ ದಿನದಂದು ನಡೆಯುತ್ತದೆ. ಮೊದಲ ದಿನದಿಂದ ಆರನೇ ದಿನದವರೆಗೂ ಪೂಜೆಗಳು ನಡೆಯುತ್ತಿರುತ್ತವೆ. ತಿಗಳ ಸಮುದಾಯದ ಹೆಂಗಸರು ಅಂದು ಅವರ ದೇವತೆಯಾದ ದ್ರೌಪತಿಗೆ ಆರತಿ ಸೇವೆಯನ್ನು ಮಾಡುವರು. ವಿವಿಧ ಹೂವಿನಿಂದ ಅಂದಗೊಂಡ ಅಕ್ಕಿ ಮತ್ತು ಬೆಲ್ಲ ಇರುವ ಪಾತ್ರೆಗಳಿಗೆ, ಮಲ್ಲಿಗೆ ಮತ್ತು ಕನಕಾಂಬರ ಹೂವುಗಳಿಂದ ಸುತ್ತುವರಿದ ಕೋಲನ್ನು ಸಿಕ್ಕಿಸಲಾಗಿರುತ್ತದೆ. ಪಾತ್ರೆಯ ಒಳಗೆ ದೇವಿಗೆಯನ್ನು ಇಡಲಾಗಿರುತ್ತದೆ. ಈ ಆರತಿಯನ್ನು ಹೆಂಗಸರು ತಲೆ ಮೇಲೆ ಹೊತ್ತು ಗುಡಿಯವರೆಗೂ ಬಂದು ಆಮೇಲೆ ಪೂಜೆ ಮಾಡುತ್ತಾರೆ. ಆಮೇಲೆ ಗರಡಿಮನೆಯಲ್ಲಿ ಕಸರತ್ತು ಮಾಡಿರುವ ಹುಡುಗರು ಕಾಳಗ ಕಲೆಗಳಾದ ಕತ್ತಿ ವರಸೆ, ಕೋಲು ವರಸೆ, ಕೊಂಬು ವರಸೆ ಮುಂತಾದ ಚಳಕಗಳನ್ನು ತೋರಿಸುವರು. ಹಾಗೆಯೇ ಅಂದು ‘ಪೋತರಾಜ’ನ (ಪೋತರಾಜನ ಬಗ್ಗೆ ಮುಂದೆ ತಿಳಿಯುತ್ತದೆ) ಮೂರುತಿ ಮತ್ತು ತ್ರಿಶೂಲವನ್ನು ಮೆರವಣಿಗೆಯಲ್ಲಿ ಒಯ್ಯಲಾಗುತ್ತದೆ. ಮೆರವಣಿಗೆ ಮುಗಿದ ಮೇಲೆ ಗುಡಿಯಲ್ಲಿ ಮಹಾ ಮಂಗಳಾರತಿ ಮಾಡುವರು. ದೇವಸ್ಥಾನದಿಂದ ಹೊರಡುವ ಆರತಿ ಉತ್ಸವವು ಬಲಭಾಗಕ್ಕೆ ತಿರುಗಿ ತಿಗಳರ ಪೇಟೆ ಪೈಲ್ವಾನ್ ಅಣ್ಣಯ್ಯಪ್ಪ ಮುಖ ರಸ್ತೆ ಹಾಯ್ದು ಗೊಲ್ಲರ ಪೇಟೆ, ಕುಂಬಾರಪೇಟೆ, ಚೌಡೇಶ್ವರಿ, ಗುಡಿಬಿಡಿ ಆಯ್ದ ಅವಿನ್ಯೂರಸ್ತೆಯ ಬೆಳ್ಳಿ ಚೌಕದಲ್ಲಿ ಬಿಡು ಬಿಟ್ಟು ಕೆಲಕಾಲ ಯುದ್ಧ ಕಲೆಯ ಪ್ರದರ್ಶನಗಳನ್ನು ನಡೆಸಿ ನಂತರ ದೇವಸ್ಥಾನದ ಮುಖರಾಡ್ಸ್ಟೇಯ ಮೂಲಕ ಪೂರ್ವಕ್ಕೆ ಸಾಗಿ ಗುಡಿಸೇರುತ್ತದೆ.ಈ ಮೂಲಕ ಜನಮನದ ಕತ್ತಲನ್ನು ಕಳೆದು ಬೆಳಕನ್ನು ಚೆಲ್ಲಿ ಆದಿಶಕ್ತಿ ದೇವಿಯನ್ನು ಧರೆಗೆ ಸ್ವಾಗತಿಸುವ ಆರಾಧನೆಯು ಒಂದು ಭಾಗವು ಆರತಿ ಉತ್ಸವ ಎನಿಸಿಕೊಳ್ಳುತ್ತದೆ.

ಇದು ಕರಗ ಹಬ್ಬದ ಆರನೇ ದಿನದಂದು ನಡೆಯುತ್ತದೆ. ಮೊದಲ ದಿನದಿಂದ ಆರನೇ ದಿನದವರೆಗೂ ಪೂಜೆಗಳು ನಡೆಯುತ್ತಿರುತ್ತವೆ. ತಿಗಳ ಸಮುದಾಯದ ಹೆಂಗಸರು ಅಂದು ಅವರ ದೇವತೆಯಾದ ದ್ರೌಪತಿಗೆ ಆರತಿ ಸೇವೆಯನ್ನು ಮಾಡುವರು. ವಿವಿಧ ಹೂವಿನಿಂದ ಅಂದಗೊಂಡ ಅಕ್ಕಿ ಮತ್ತು ಬೆಲ್ಲ ಇರುವ ಪಾತ್ರೆಗಳಿಗೆ, ಮಲ್ಲಿಗೆ ಮತ್ತು ಕನಕಾಂಬರ ಹೂವುಗಳಿಂದ ಸುತ್ತುವರಿದ ಕೋಲನ್ನು ಸಿಕ್ಕಿಸಲಾಗಿರುತ್ತದೆ. ಪಾತ್ರೆಯ ಒಳಗೆ ದೇವಿಗೆಯನ್ನು ಇಡಲಾಗಿರುತ್ತದೆ. ಈ ಆರತಿಯನ್ನು ಹೆಂಗಸರು ತಲೆ ಮೇಲೆ ಹೊತ್ತು ಗುಡಿಯವರೆಗೂ ಬಂದು ಆಮೇಲೆ ಪೂಜೆ ಮಾಡುತ್ತಾರೆ. ಆಮೇಲೆ ಗರಡಿಮನೆಯಲ್ಲಿ ಕಸರತ್ತು ಮಾಡಿರುವ ಹುಡುಗರು ಕಾಳಗ ಕಲೆಗಳಾದ ಕತ್ತಿ ವರಸೆ, ಕೋಲು ವರಸೆ, ಕೊಂಬು ವರಸೆ ಮುಂತಾದ ಚಳಕಗಳನ್ನು ತೋರಿಸುವರು. ಹಾಗೆಯೇ ಅಂದು ‘ಪೋತರಾಜ’ನ (ಪೋತರಾಜನ ಬಗ್ಗೆ ಮುಂದೆ ತಿಳಿಯುತ್ತದೆ) ಮೂರುತಿ ಮತ್ತು ತ್ರಿಶೂಲವನ್ನು ಮೆರವಣಿಗೆಯಲ್ಲಿ ಒಯ್ಯಲಾಗುತ್ತದೆ. ಮೆರವಣಿಗೆ ಮುಗಿದ ಮೇಲೆ ಗುಡಿಯಲ್ಲಿ ಮಹಾ ಮಂಗಳಾರತಿ ಮಾಡುವರು. ದೇವಸ್ಥಾನದಿಂದ ಹೊರಡುವ ಆರತಿ ಉತ್ಸವವು ಬಲಭಾಗಕ್ಕೆ ತಿರುಗಿ ತಿಗಳರ ಪೇಟೆ ಪೈಲ್ವಾನ್ ಅಣ್ಣಯ್ಯಪ್ಪ ಮುಖ ರಸ್ತೆ ಹಾಯ್ದು ಗೊಲ್ಲರ ಪೇಟೆ, ಕುಂಬಾರಪೇಟೆ, ಚೌಡೇಶ್ವರಿ, ಗುಡಿಬಿಡಿ ಆಯ್ದ ಅವಿನ್ಯೂರಸ್ತೆಯ ಬೆಳ್ಳಿ ಚೌಕದಲ್ಲಿ ಬಿಡು ಬಿಟ್ಟು ಕೆಲಕಾಲ ಯುದ್ಧ ಕಲೆಯ ಪ್ರದರ್ಶನಗಳನ್ನು ನಡೆಸಿ ನಂತರ ದೇವಸ್ಥಾನದ ಮುಖರಾಡ್ಸ್ಟೇಯ ಮೂಲಕ ಪೂರ್ವಕ್ಕೆ ಸಾಗಿ ಗುಡಿಸೇರುತ್ತದೆ.ಈ ಮೂಲಕ ಜನಮನದ ಕತ್ತಲನ್ನು ಕಳೆದು ಬೆಳಕನ್ನು ಚೆಲ್ಲಿ ಆದಿಶಕ್ತಿ ದೇವಿಯನ್ನು ಧರೆಗೆ ಸ್ವಾಗತಿಸುವ ಆರಾಧನೆಯು ಒಂದು ಭಾಗವು ಆರತಿ ಉತ್ಸವ ಎನಿಸಿಕೊಳ್ಳುತ್ತದೆ.

ಚೈತ್ರ ಶುದ್ಧ ತ್ರಯೋದಶೀಯದ ದಿವಸ ಧರ್ಮರಾಯಸ್ವಾಮಿ ದೇವಾಲಯದ ಪೂರ್ವಕ್ಕೆ ಸ್ವಲ್ಪ ದೂರದಲ್ಲಿರುವ ಸಂಪಂಗಿ ಕೆರೆಯ ಅಂಗಳದಲ್ಲಿ ನಡುರಾತ್ರಿಯ ಹೊತ್ತಿಗೆ ಪೂಜಾರಿ, ಕುಲಪುರೋಹಿತರು, ವೀರಕುಮಾರರು ಮತ್ತು ಕುಲಸ್ಥರು ಸೇರುವರು. ಅಲ್ಲಿ ಒಂದೆಡೆ ಸ್ಥಳ ಶುದ್ಧಿಮಾಡಿ ಕೆಂಪು ಬಣ್ಣದ ಛತ್ರಿಯನ್ನು ನೆಡುವರು. ಹಿಂದಿನ ಏಳು ದಿನಗಳಿಂದ ವ್ರತ ನಿರತರಾಗಿದ್ದ ವೀರಕುಮಾರರು ಹೊಳೆಯುವ ಹರಿತವಾದ ಶಕ್ತಿಗಳನ್ನು ಅರ್ಧ ಚಂದ್ರಾಕಾರವಾಗಿ ಜೋಡಿಸುವರು. ಇವರು ಕರಗ ದೇವತೆಯ ಹೆಸರಿನಲ್ಲಿ ತಮ್ಮ ಕುಲ ಪುರೋಹಿತರು ಮತ್ತು ಹಿರಿಯರ ಸಮ್ಮುಖದಲ್ಲಿ ದೀಕ್ಷೆ ಕೈಗೊಂಡವರು, ದೇವಿಯ ಆರಾಧನೆಯಲ್ಲಿ ಅಚಲವಾದ ಶ್ರದ್ಧೆ ಭಕ್ತಿಯನ್ನು ಇಟ್ಟಿರುವ ಇವರು ಕರಗಕ್ಕೆ ಅಂಗ ರಕ್ಷಕರು. ಭಕ್ತಿ ದ್ಯೋತಕವಾಗಿ ಕೈಯಲ್ಲಿರುವ ಅಲರುಗಳಿಂದ ಎದೆಯ ಮೇಲೆ ಇವರು ಪ್ರಹಾರ ಮಾಡಿಕೊಳ್ಳುತ್ತಾರೆ. ಆಗ ರಕ್ತ ಬಂದರ ಔಷಧಿಯ ಬದಲಾಗಿ ದೇವಿಯ ಬಂಡಾರವನ್ನು ಗಾಯದ ಮೇಲೆ ಹಾಕಿಕೊಳ್ಳುತ್ತಾರೆ. ಆನಂತರ ಕುಲಪುರೋಹಿತರ ನಿರ್ದೇಶನ ಮತ್ತು ಕುಲವೃದ್ಧರ ನೇತೃತ್ವದಲ್ಲಿ ರಾತ್ರಿ ಸುಮಾರು ಮೂರುಗಂಟೆಯ ಹೊತ್ತಿಗೆ ಹಸೀಕರಗ ಸಿದ್ಧವಾಗಿರುತ್ತದೆ. ಕೆಂಪು ಛತ್ರಿಯ ಕೆಳಗೆ, ಅರ್ಧ ಚಂದ್ರಾಕಾರವಾಗಿ ಜೋಡಿಸಿದ ಕತ್ತಿಗಳ ಮಧ್ಯೆ ಜಲ ತುಂಬಿದ ಕರಗವನ್ನು ಕೆಂಪು ವಸ್ತ್ರ, ದುಂಡು ಮಲ್ಲಿಗೆಹಾರ, ಅರಿಶಿಣ - ಕುಂಕುಮ ಮುಂತಾದ ಮಂಗಳ ದ್ರವ್ಯಗಳಿಂದ ಅಲಂಕರಿಸಿ ಪೂಜೆಗೆ ಅಣಿ ಮಾಡಲಾಗುತ್ತದೆ. ಈ ವೇಳೆಗಾಗಲೇ ಕರಗದ ಪೂಜಾರಿಯನ್ನು  ಮಲ್ಲಿಗೆ ಹೂವಿನಿಂದ ಸಿಂಗರಿಸಿರುತ್ತಾರೆ. ಪೂಜಾರಿ ಮಹಾ ಮಂಗಳಾರತಿ ಮಾಡುತ್ತಾನೆ. ದೇವಿಯ ಸೇವೆಗಾಗಿ ನಿಂತಿರುವ ವೀರಕುಮಾರರು ಗೋವಿಂದ ನಾಮ ಸ್ಮರಣೆ ಮಾಡುತ್ತಾ ಆವೇಶ ತುಂಬಿಕೊಂಡು ಎದೆಯ ಮೇಲೆ ಪ್ರಹಾರ ಮಾಡಿಕೊಳ್ಳುತ್ತಾರೆ. ಸುತ್ತುವರೆದ ವೀರಕುಮಾರರ ನಡುವೆ ಪೂಜಾರಿ ಭಕ್ತಿಯಿಂದ ಕರಗವನ್ನು ಎತ್ತಿಕೊಂಡು, ತನ್ನ ಸೊಂಟದ ಎಡಭಾಗದಲ್ಲಿ ಗಡಿಗೆ ಇಟ್ಟುಕೊಳ್ಳುವಂತೆ ಇಟ್ಟುಕೊಳ್ಳುತ್ತಾನೆ. ಪೂಜಾರಿ ನರ್ತನ ಮಾಡುತ್ತಾ ಮುಂದುವರೆಯುತ್ತಾನೆ. ಘಂಟೆ ಪೂಜಾರಿ ಮಾರ್ಗದರ್ಶನ ಮಾಡುತ್ತಿರುತ್ತಾನೆ. ಈ ಮಹೋತ್ಸವದಲ್ಲಿ ಘಂಟೆ ಪೂಜಾರಿಯ ಪಾತ್ರ ಮುಖ್ಯವಾದದ್ದು. ಕರಗ ಹೊರಟಾಗ ಈತ ತಾಳಬದ್ಧವಾಗಿ ಘಂಟೆಯ ನಾದ ಮಾಡುತ್ತಾ, ದೇವಿಯ ಮಹಿಮೆಯನ್ನು ಹೊಗಳುತ್ತಾ ಕರಗಕ್ಕೆ ಮಾರ್ಗದರ್ಶನ ಮಾಡುತ್ತಾ ಮುಂದುವರೆಯುತ್ತಾನೆ. ಈ ಹಕ್ಕು ಪೂಜಾರಿಯ ಹಕ್ಕಿನಂತೆ ವಂಶಪಾರಂಪರ್ಯವಾಗಿ ಬಂದಿದೆ. ಮಧ್ಯೆ ಕೆಲವೆಡೆ ಪೂಜಾರಿ ಮಂಡಿಯೂರಿ ಕುಳಿತಾಗ ಅಲಗು ಸೇವೆ ನಡೆಯುತ್ತದೆ. ಹೀಗೆ ಮುಂದುವರೆದ ಹಸೀಕರಗ ನಗರಸಭೆ ಕಛೇರಿಯ ಉತ್ತರ ಭಾಗದಲ್ಲಿರುವ ಏಳು ಸುತ್ತಿನ ಕೋಟೆಯ ಸಂಕೇತದಲ್ಲಿರುವ ದೊಡ್ಡ ಹುತ್ತವನ್ನು ಏಳು ಅಥವಾ ಒಂಬತ್ತು ಸಲ ಪ್ರದಕ್ಷಿಣೆ ಮಾಡಿ ದೇವಾಲಯದ ಅಭಿಮುಖವಾಗಿ ಬಂದು ದೇವಾಸ್ಥಾನ ಮತ್ತು ಹೊರಾಂಗಣದಲ್ಲಿ ಸಿದ್ಧವಾಗಿರುವ ರಥವನ್ನು ಪ್ರದಕ್ಷಿಣೆ ಮಾಡಿ ನರ್ತನ ಮಾಡುತ್ತದೆ. ಮಾರನೆಯ ದಿನ ಚತುರ್ದಶಿ. ಅಂದು ರಾತ್ರಿ ದೇವಾಲಯದಲ್ಲಿ ಮಹಾಭಾರತ ಪ್ರವಚನ, ಸೂರ್ಯೋದಯದ ವೇಳೆಗೆ ಪೊಂಗಲು ಸೇವೆಯನ್ನೊಳಗೊಂಡು ಹಲವು ಕಾರ್ಯಗಳಿರುತ್ತವೆ. ಹೆಗಲಿಗೆ ಅಡ್ಡಲಾಗಿ ಇಳಿಬಿಟ್ಟುಕೊಂಡ ಗಟ್ಟಿ ಬಟ್ಟೆಯ `ನವಾರ’ದಲ್ಲಿ ಸಿಕ್ಕಿಸಿದ ಪಟದ ಕೋಲನ್ನು ಬಲಗೈಯಲ್ಲಿ ಹಿಡಿದುಕೊಂಡ ಕಲಾವಿದರು ವಾದ್ಯದ ಗತ್ತಿಗೆ ಅನುಗುಣವಾಗಿ ವಿವಿಧ ಭಂಗಿಗಳಲ್ಲಿ ಕುಣಿಯುತ್ತಾರೆ. ಕುಣಿತಕ್ಕೆ ಇಷ್ಟೇ ಜನರಿರಬೇಕೆಂಬ ನಿಯಮವಿಲ್ಲದಿದ್ದರೂ ಹತ್ತು ಹನ್ನೆರಡಕ್ಕಿಂತ ಹೆಚ್ಚು ಜನರಿದ್ದರೇ ನೋಡಲು ಚೆಂದ. ಕುಣಿಯುವಾಗ ಪಟದ ಜವಳಿಗಳು ಅತ್ತಿತ್ತ ಬಾಗುವಾಗ ಅವಕ್ಕೆ ಸುತ್ತಿದ್ದ ಬಟ್ಟೆಯ ಜಾಲರಿಗಳ ಚಲ್ಲಾಟದ ದೃಶ್ಯ ಮನಮೋಹಕ. ಪಟದ ಸೊಬಗನ್ನು ಹೆಚ್ಚಿಸಲು ತುದಿಯಲ್ಲಿ ರೇಷ್ಮೆ ಗೊಂಡೇವುಗಳನ್ನು ಕಟ್ಟಿರುವುದುಂಟು. ಕುಣಿತದಲ್ಲಿ ಗೆಜ್ಜೆ ಕುಣಿತ, ಎರಡ್ಹೆಜ್ಜೆ, ಮೂರು ಹೆಜ್ಜೆ ಮೊದಲಾದ ವಿಧಗಳಿವೆ. ಸಾಮಾನ್ಯವಾಗಿ ಒಂಟಿ ಸಾಲಿನಲ್ಲಿ ಕುಣಿತ ನಡೆಯುತ್ತದೆ. ಒಮ್ಮೊಮ್ಮೆ ಕಲಾವಿದರು ಎರಡು ಸಾಲಾಗಿ ಪರಸ್ಪರ ಎದುರು ನಿಂತು, ಒಮ್ಮೊಮ್ಮೆ ವೃತ್ತಾಕಾರದಲ್ಲಿ ಚಲಿಸುತ್ತಾ ಪಟದ ಜವಳಿಗಳನ್ನು ಹಿಂದಕ್ಕೆ ಮುಂದಕ್ಕೆ ಬಾಗಿಸಿ ಕುಣಿಯುವ ವಿಧಾನವಂತೂ ಕಣ್ಣಿಗೆ ಹಬ್ಬ. ಕುಣಿತದ ಗತ್ತು, ವಿನ್ಯಾಸಗಳನ್ನು ನೋಡಿದರೆ ವಿಜಯದ ಸಂಭ್ರಮ ಸಡಗರಗಳ ಸಂಕೇತವೆಂಬುದು ಸ್ಪಷ್ಟವಾಗುತ್ತದೆ, ಕೆಲವು ಕಡೆ ಭಾಗವಂತಿಕೆಯ ಜೊತೆಯಲ್ಲಿ ಪಟದ ಕುಣಿತ ನಡೆಯುವುದುಂಟ. ಮಂಡ್ಯ ಜಿಲ್ಲೆಯ ಕೆಲವು ಕಡೆ ದೀವಳಿಗೆ ತಿಂಗಳಲ್ಲಿ ಮಾತ್ರ ಪಟ ಮುಟ್ಟುವ ಸಂಪ್ರದಾಯವಿದೆ ಎಂದು ಹೇಳುತ್ತಾರೆ.

ಇದು ಹಬ್ಬದ ಎಂಟನೆ ದಿನ ನಡೆಯುತ್ತದೆ. ಅಂದು ಹೆಣ್ಣುಮಕ್ಕಳು ಅಕ್ಕಿ ಮತ್ತು ಬೆಲ್ಲವನ್ನು ಗುಡಿಗೆ ಒಯ್ದು ಗುಡಿಯ ಅಂಗಳದಲ್ಲಿ ಪೊಂಗಲನ್ನು ಮಾಡಿ ದೇವಿಗೆ ಎಡೆ ಮಾಡುವರು. ತಮ್ಮ ಸೇವೆಯಿಂದ ತಾಯಿಯು ಸಂತಸಗೊಂಡು ಆಕೆಯು ನಮ್ಮನ್ನು ಹರಸುವಳು ಎಂಬ ನಂಬಿಕೆ ಜನರದ್ದು. ಅಂದಿಡೀ ದಿನ ಅಲ್ಲೇ ಇರುವರು. ಇರುಳಲ್ಲಿ ಗಂಟೆ ಪೂಜಾರಿಗಳು  ದ್ರೌಪದಿ ಬಗ್ಗೆ ಪುರಾಣ ಕತೆಗಳನ್ನು ಹೇಳುವುದು ಮತ್ತು ಬಕ್ತರು ಅದನ್ನು ಕೇಳುವುದು ವಾಡಿಕೆ.

ಪ್ರತಿ ವರ್ಷ ಚೈತ್ರಮಾಸದ ಹುಣ್ಣಿಮೆಯಂದು ರಾತ್ರಿ ನಡೆಸುವ ಉತ್ಸವವನ್ನು ಕರಗ ಶಕ್ತ್ಯೋತ್ಸವ/ ಹೂವಿನ ಕರಗ ಎಂದು ಸಂಭೋದಿಸಲಾಗುತ್ತದೆ ಅನೇಕ ಭಕ್ತರ ಹಾಡುವ ಭಾಷೆಯಲ್ಲಿ ಬೆಂಗಳೂರು ಕರಗವೆಂದೇ ವಿಶ್ವಖ್ಯಾತಿ ಗಳಿಸಿದೆ. ಮೈಸೂರಿನ ಉತ್ಸವದಂತೆಯೇ ಬೆಂಗಳೂರಿನ ಕರಗ ನಾಡಹಬ್ಬವೆಂದು ವಾಡಿಕೆಯಾಗಿದೆ. ಜನಾಂಗದವರಲ್ಲದೆ ಇತರ ಸಮುದಾಯ ಮತ್ತು ಮುಸ್ಲಿಮ್ ಬಾಂಧವರ ಆಹ್ವಾನದಂತೆ ತವಕಲ್ ಮಸ್ತಾನ್ ಸಾಬ್ ದರ್ಗಾಕ್ಕೂ ಧಾವಿಸಿ ಪೂಜೆ ಸ್ವೀಕರಿಸಿ ಪ್ರಸಾದ ನೀಡಿ ಬರುವುದು ಶತಶತ ಮಾನಗಳಿಂದ ನಡೆದು ಬಂದಿದೆ. ಎದು ಹಿಂದೂ ಮತ್ತು ಮುಸ್ಲಿಮ್ ರ ಭಾಂದವ್ಯವನ್ನು ಎತ್ತಿ ತೋರಿಸುತ್ತದೆ. ಇಂದು ಚಂದ್ರೋದಯ ಆಗುತ್ತಿದ್ದಂತೆ ಗೌಡರು, ಗಣಾಚಾರಿ, ಗಂಟೆ ಪೂಜಾರಿ, ಚಾಕರಿದಾರರು ವೀರಕುಮಾರರನ್ನು ಕರಗದ ಕರ್ತಾ ಪೂಜಾರಿಯೊಂದಿಗೆ ಮಂಗಳವಾದ್ಯಗಳ ಸಮೇತ ಮೂಲಸ್ಥಾನವಾದ ಕರಗದ ಕುಂಟೆಗೆ ಬಂದು ಪುಣ್ಯಸ್ನಾನಾಧಿ ಪೂಜೆಗಳನ್ನು ನಡೆಸಿ ಅಲ್ಲಿಂದ ಶಕ್ತಿಪೀಠ ಸ್ಥಳಕ್ಕೆ ಬಂದು ಮಂತ್ರರಾಧನೆಗಳಿಂದ ಕಾರಗಕರ್ತ ಪೂಜಾರಿಯನ್ನು ನಡೆಸಿ ಅಲ್ಲಿಂದ ಶಕ್ತಿಪೀಠ ಸ್ಥಳಕ್ಕೆ ಬಂದು ಮಂತ್ರರಾಧನೆಗಳಿಂದ ಕಾರಗಕರ್ತ ಪೂಜಾರಿಯನ್ನು ಸಿದ್ಧಗೊಳಿಸಿಕೊಂಡು ದೇವಸ್ಥಾನಕ್ಕೆ ಬಂದು ಸೇರುವರು ಗಂಟೆ ಪೂಜಾರಿ ಕುಲಪುರೋಹಿತಾ ಕರಗಕರ್ತ ಪೂಜಾರಿ ಇವರುಗಳನ್ನು ದೇವತಾರಾಧನೆಗೆ ಗರ್ಭಗುಡಿಗೆ ಕಳಿಸಿ, ಚಾಕರಿದಾರರು ವೀರಕುಮಾರರನ್ನು ತಮ್ಮ ಮನೆಗೆ ಆಹ್ವಾನಿಸಿ ಪಾನಕ ಫಲಾಹಾರಗಳನ್ನು ನೀಡಿ ಗೌರವಿಸಿ ಸಮರ್ಥ ರೀತಿಯಲ್ಲಿ ನಡೆಸಿಕೊಡುವಂತೆ ಪ್ರೋತ್ಸಾಹಿಸುವರು. ಮುತ್ಯಾಲಮ್ಮ ದೇವಾಲಯ ಅರ್ಚಕರು ವೀರಕುಮಾರರಿಗೆ ಮತ್ತು ಕುಲಸ್ಥರಿಗೆ ಗಂಧಭಂದಾರಾಧಿಗಳನ್ನು ನೀಡಿ ಸತ್ಕರಿಸುವರು ದೇವಸ್ಥಾನ ವ್ಯವಸ್ತಾಸನ ಸಮಿತಿಯು ಗೌಡರು, ಗಣಾಚಾರಿ ಗಂಟೆ ಪೂಜಾಯಾದಿ ಚಾಕರಿದಾರಾಧಿ ವೀರಕುಮಾರರಿಗೆ ಪುಷ್ಟಮಳೆಗಳನ್ನು ನೀಡಿ ಗೌರವಿಸುವರು. ತೇರು ಎಳೆಯುವ ರಥೋತ್ಸವ ಸಮಿತಿಯವರು ಮಹಾರಥವನ್ನು ಸಿದ್ಧಿಪಡಿಸಿ ಸಿಂಗರಿಸಿ ಧರ್ನುಧಾರಿಯಾದ ಶ್ರೀ ಅರ್ಜುನದೇವ ಮತ್ತು ಶ್ರೀ ದ್ರೌಪದಿ ದೇವಿಯ ಉತ್ಸವ ಮೂರ್ತಿಗಳನ್ನು ರಥದಲ್ಲಿಟ್ಟು ಸಿಂಗರಿಸಿ ಮಹಾರಥೋತ್ಸವಕ್ಕೆ ಚಾಲನೆ ನೀಡಲಾಗುವುದು. ಅದೇ ಸಮಯದಲ್ಲಿ ಮುತ್ಯಾಲಮ್ಮದೇವಿಯ ರಥವು ಸಾಗುವುದು, ದೇವಸ್ಥಾನದ ಗರ್ಭಗುಡಿಯಲ್ಲಿ ವರ್ಷವಿಡೀ ಪೂಜಿಸುವ ದೇವತೆಗಳಾದ ಶ್ರೀ ಕೃಷ್ಣ ಕುಂತಿದೇವಿ, ಧರ್ಮರಾಯ, ಭೀಮ, ನಕುಲ-ಸಹದೇವರು, ಅಭಿಮಾನ್ನ್ಯು, ಇವರುಗಳು ಕಂಚಿನ ಉತ್ಸವ ಮೂರ್ತಿಗಳನ್ನು ನೀಲಸಂದ್ರ ಗ್ರಾಮವಾಸಿಗಳಾದ ಕುಲಸ್ಥರು ತಲೆಯ ಮೇಲೆ ಹೊತ್ತು ಸಾಗುವರು ನಂತರ ಚಂದ್ರ ನಡುನೆತ್ತಿಗೇ ಏರುವ ಸಮಯದಲ್ಲಿ ಕರಗವನ್ನು ಶಿರದಲ್ಲಿ ಧರಿಸಿದ ಕರಗಕರ್ತ ಪೂಜಾರಿಯು ದೇವಸ್ಥಾನದ ಗರ್ಭಗುಡಿಯಿಂದ ಹೊರಬಂದು ದೇವಸ್ಥಾನಕ್ಕೆ ಪ್ರದಕ್ಷಣೆ ಸಲ್ಲಿಸಿ ವೀರಕುಮಾರರೊಂದಿಗೆ ಭಕ್ತಾದಿಗಳಿಗೆ ದರ್ಶನ ನೀಡುತ್ತಾ ಸಾಗುತ್ತದೆ.

ರಥೋತ್ಸವ ನಡೆದು ಹೋಗುವ ದಾರಿ:
                ಶಕ್ತ್ಯೋತ್ಸವವು ದೇವಸ್ಥಾನದ ಆವರಣದಲ್ಲಿ ಮಹಾಗಣಪತಿ ಮತ್ತು ಮುತ್ಯಾಲಮ್ಮನ ದೇವಸ್ಥಾನದಲ್ಲಿ ಪೂಜೆ ಸ್ವೀಕರಿಸಿ ಪೂರ್ವಕ್ಕೆ ಸಂಚರಿಸಿ ಹಲಸೂರು ಆಂಜೆನೇಯ ದೇವಸ್ಥಾನ ಶ್ರೀರಾಮರ ದೇವಸ್ಥಾನ ಮತ್ತು ಜಲಕಂಠೇಶ್ವರ ದೇವಸ್ಥಾನಗಳಲ್ಲಿ ಪೂಜೆ ಸ್ವೀಕರಿಸಿ ದೇವಸ್ಥಾನಕ್ಕೂ ಮತ್ತು ಮಹಾರಥಕ್ಕೆ ಭಾರಿ ಪ್ರದಕ್ಷಣೆ ಸಲ್ಲಿಸಿ ವಿಶೇಷ ಆಹ್ವಾನಿತರಿಗೆ ಗಣ್ಯರಿಗೆ ದರ್ಶನ ಕೊಟ್ಟು ನಿಂಬೆಹಣ್ಣಿನ ಪ್ರಸಾದವನ್ನುಣ್ಣಿಡಿ ನಗರ ಪ್ರದಕ್ಷಣೆ ಸಾಗುತ್ತದೆ. ನಂತರ ಶ್ರೀ ಕಿಷ್ಣಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸ್ವೀಕರಿಸಿ ಗಾಣಗಾರಪೇಟೆ ನಾರ್ಥರಪೇಟೆ, ನಾರಾಯಣಶೆಟ್ಟಿ ಪೇಟೆ, ಮಕ್ಕಳ ಬಸವಣ್ಣನಗುಡಿ ಬಿಡಿ, ಕಾಳಿಕಾಂಬಾ ದೇವಸ್ಥಾನ , ಬೆಳ್ಳಿಯ ಚೌಕ ಅವಿನ್ನ್ಯು ರಸ್ತೆಯ ಮೂಲಕ ಕೋಟೆ ಆಂಜೆನೇಯ ಸ್ವಾಮಿ ದೇವಸ್ಥಾನ, ಶ್ರೀ ಕೃಷ್ಣರಾಜೇಂದ್ರ ಮಾರುಕಟ್ಟೆ ಪೋಲಿಷ್ ರಸ್ತೆ ಮೂಲಕ ಉಪ್ಪಾರಪೇಟೆ, ಅಕ್ಕಿಪೇಟೆ, ಮಾನವರ್ತಪೇಟೆ, ಮಾಮುಲುಪೇಟೆ ಪೂಜೆ ಸ್ವೀಕರಿಸಿ ತವಕಾಲ್ ಮಸ್ತಸ್ ಸಾಬ್ ದರ್ಗ ನಿಮಿಶಂಬಾ ದೇವಸ್ಥಾನಗಳಲ್ಲಿ ಪೂಜೆ ಸ್ವೀಕರಿಸಿ ಬೆಳೆಪೇಟೆ ಮೂಲಕ ಕೆಂಪೇಗೌಡ ವೃತ್ತ ದಾಟಿ ನಗರದೇವತೆ ಅಣ್ಣಮ್ಮ ದೇವಿ ಗುಡಿಯಲ್ಲಿ ಪೂಜೆ ಸ್ವೀಕರಿಸಿ ಕಿಲಾರಿ ಪೇಟೆ ಮೂಲಕ ಹಾಡು ಯಲಹಂಕ ಗೆಟ್ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸ್ವೀಕರಿಸಿ, ಅವಿನ್ಯೂರು ರಸ್ತೆಯ ಮೂಲಕ ಹಾದು ಬಳ್ಳಾಪುರ ಪೇಟೆಯಾ ರಂಘಾಸ್ವಾಮಿ ದೇವಸ್ಥಾನದ ತುಪ್ಪದ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸ್ವೀಕರಿಸಿ, ಚೌಡೇಶ್ವರಿ ಗುಡಿ ಬೀದಿಯಲ್ಲಿ ಹಾಡು ಕುಂಬಾರು ಪೇಟೆ ಪ್ರವೇಶಿಸಿ ಭಕ್ತಾದಿಗಳ ಮನೆ ಪೂಜೆ ಸ್ವೀಕರಿಸಿ, ಗೊಲ್ಲರಪೇಟೆ ಹಾಡು ಬೆಳಗಿನ ಜಾವಾ ತಿಗಳರ ಪೇಟೆಯನ್ನು ಪ್ರವೇಶಿಸುವುದು. ತಿಗಳರ ಪೇಟೆಯಲ್ಲಿ ಕುಲಸ್ಥರ ಪೂಜೆ ಸ್ವೀಕರಿಸಿ ಸುಣಕಲ್ ಪೇಟೆ ಹಾಡು ಹಲುಬಿಡಿ ಕಬ್ಬನಪೇಟೆ ಜೆಯಿರಿಪೇಟೆಗಳನ್ನುಂಹದು ಪೂಜೆ ಸ್ವೀಕರಿಸುತ್ತಾ ಹಲಸೂರ ಪೇಟೆಯ ಚಿಕ್ಕ ಅಣ್ಣಮ್ಮನ ಗುಡಿ ಗಂಗಮ್ಮನ ಗುಡಿ ಪೂಜೆ ಸ್ವೀಕರಿಸಿ, ಬ್ರಾಹ್ಮಣರ ಬಿಡಿ ರಾಮಮಂದಿರ ಪೂಜೆ ಸ್ವೀಕರಿಸಿ, ನರಸಿಂಹ ಜ್ಯೋಯಿಷಿಗಲ್ಲಿಯಾ ಮೂಲಕ ಕುಲಸ್ಥರ ಮನೆಗಳಲ್ಲಿ ಪೂಜೆ ಸ್ವೀಕರಿಸಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸ್ವೀಕರಿಸಿಕ್ಕೆ ಧಾವಿಸಿ ಸಾರ್ಥಕ ಪ್ರದಕ್ಷಣೆಯನ್ನು ಸಲ್ಲಿಸಿ ಗರ್ಭಗುಡಿಗೆ ಹಿಂದುರುಗುವುದು ಇಲ್ಲಿಗೆ ಕರಗ ಶಕ್ತ್ಯೋತ್ಸವ ಯಶಸ್ವಿಯಾಗಿ ಮುಗಿದಂತಾಯಿತು. ನಂತರ ಭಕ್ತಾದಿಗಳು ಕರಗದ ದರ್ಶನ ಮಾಡಿಕೊಂಡು ಅನ್ನಪ್ರಸಾದವನ್ನು ಸ್ವೀಕರಿಸುತ್ತಾರೆ. ಈ ದಿನದಂದು ಕಾರಾಗಾಶಕ್ತ್ಯೋತ್ಸವ ಮತ್ತು ಶ್ರೀ ಧರ್ಮರಾಯಸ್ವಾಮಿ ಮಹಾರಥೋತ್ಸವದ ಜೊತೆಗೆ ಬೆಂಗಳೂರಿನ ದೇವಸ್ಥಾನಗಳಿಂದ ನೂರಾರು ರಥಗಳು ಉತ್ಸವದಲ್ಲಿ ಪಾಲ್ಗೊಳ್ಳುತ್ತವೆ. ಈ ಉತ್ಸವದಲ್ಲಿ ತುಂಬಾ ಜನ ನೆರೆವೇರುವುದರಿಂದ ಭಕ್ತರಿಗೆ ಅನುಕೂಲವಾಗುವಂತೆ ನೀರಿನ ಕೊಳಿವೆಗಳನ್ನು ಅಲ್ಲಲ್ಲಿ ಅಳವಡಿಸಲಾಗಿರುತ್ತದೆ. ಬಡ ಜನ್ರಿಗೆ ನುಣರು ಸ್ಥಳಗಳಲ್ಲಿ ಪಾನಕ ನೀರು, ಕೋಸಂಬರಿ, ಅನ್ನದಾನ ಕೇಂದ್ರಗಳನ್ನು ಏರ್ಪಡಿಸಿರುತ್ತಾರೆ.

ಹಬ್ಬದ ಹತ್ತನೇ ಜರಗುವ ಇದು ಪೋತರಾಜನ ಕುರಿತು ಮಾಡುವ ಸೇವೆಯಾಗಿದೆ. ಪೋತರಾಜನ ಬಗ್ಗೆ ಒಂದು ಕತೆಯಿದೆ. ಪೋತರಾಜನು ಬಹಳ ಶೂರನಾಗಿದ್ದವನು ಮತ್ತು “ಏಳು ಸುತ್ತಿನ ಕೋಟೆ” ಎಂಬ ಅರಸು ನಾಡನ್ನು ಆಳುತ್ತಿದ್ದನು(ಸಾಮ್ರಾಜ್ಯ). ಆತ ಶಿವನ ಭಕ್ತನಾಗಿದ್ದು, ಅವನು ಹಸಿ ಮಾಂಸ ತಿನ್ನುತ್ತಿರುವುದಿಲ್ಲ. ಅವನು ಇನ್ನೂ ಹೆಚ್ಚು ಶಕ್ತಿಯನ್ನು ಪಡೆಯಲು ನೂರಾವೊಂದು ರಾಜರನ್ನು ಬಲಿ ಕೊಟ್ಟು ಶಿವನನ್ನು ಒಲಿಸಿಕೊಳ್ಳಲು ಪೂಜೆಯೊಂದನ್ನು ಮಾಡಬಯಸಿರುತ್ತಾನೆ. ನೂರು ರಾಜರನ್ನು ಸೆರೆ ಹಿಡಿದಾದಮೇಲೆ ಅವನ ಕೋಟೆಯ ಹತ್ತಿರ ನಿದ್ದೆ ಮಾಡುತ್ತಿದ್ದ ಭೀಮನನ್ನು ನೂರಾ ಒಂದನೇ ರಾಜನಾಗಿ ಸೆರೆ ಹಿಡಿಯುತ್ತಾನೆ.
                ಪಾಂಡವರು ಭೀಮನ ಇಲ್ಲದಿರುವಿಕೆ ಬಗ್ಗೆ ಕೃಷ್ಣನನ್ನು ಕೇಳುತ್ತಾರೆ. ಕೃಷ್ಣನಿಗೆ ಎಲ್ಲವೂ ಗೊತ್ತಾಗಿ ಭೀಮನನ್ನು ಉಳಿಸಲು ಅರು ಜನನನ್ನು ಚೆಂದದ ಬಳೆ ಮಾರುವ ಕೊರವಂಜಿ ಹೆಣ್ಣಾಗಿ ಮಾಡಿ ಪೋತರಾಜನ ಕೋಟೆಯ ಹತ್ತಿರ ಕಳಿಸುವನು. ಆಕೆಯನ್ನು ನೋಡಿ ಆಕೆಯ ಚಂದಕ್ಕೆ ಮನಸೋತ ಪೋತರಾಜನು ಆಕೆಯನ್ನು ಮದುವೆಯಾಗಲು ಬಯಸುವನು. ಆಗ ಎಲ್ಲವೂ ತಿಳಿದ ಕೃಷ್ಣನು ಎರಡು ಬೇಡಿಕೆ ಮುಂದಿಡುತ್ತಾನೆ. ಸೆರೆಹಿಡಿದಿರುವ ಅರಸರನ್ನು ಬಿಡುಗಡೆಗೊಳಿಸುವುದು ಒಂದನೆಯದಾದರೆ, ಕೊರವಂಜಿಗಳು ಹಸಿಬಾಡು(ಹಸಿಮಾಂಸ) ತಿನ್ನುವುದರಿಂದ ಪೋತರಾಜನೂ ತಿನ್ನಬೇಕೆಂಬವುದು ಎರಡೆಯನೆದು. ಕಡೆಗೆ ಪೋತರಾಜನು ಎರಡೂ ಬೇಡಿಕೆಗೆ ಒಪ್ಪುವನು. ಮೊದಲಿಗೆ ಪೋತರಾಜನಿಗೆ ಕರಿಮೇಕೆಯೊಂದನ್ನ್ನುಕೊಟ್ಟು ಹಸಿಯಾಗಿಯೇ ತಿನ್ನಲು ಹೇಳುವರು. ಪೋತರಾಜನು ಭೀಮನ ಜೊತೆ ನೆತ್ತರು ಸಮೇತ ಹಸಿ ಬಾಡನ್ನು ತಿನ್ನುವನು ಆಗ ಪಾಂಡವರು ತಮ್ಮ ತಂಗಿ ಶಂಕೊದರಿಯನ್ನು ಪೋತರಾಜನಿಗೆ ಕೊಟ್ಟು ಮದುವೆ ಮಾಡುತ್ತಾರೆ ಎಂದು ಆ ಒಂದು ಕತೆ ಹೇಳುತ್ತದೆ. ಹಬ್ಬದ ಹತ್ತನೇ ದಿನದಂದು ಪೋತರಾಜ, ಆರು ಜನ ಮತ್ತು ದ್ರೌಪದಿಯನ್ನು ತೇರಿನ ಮೆರವಣಿಗೆಯ ಶಕ್ತಿ ಸ್ಥಳಕ್ಕೆ ಕರೆದೊಯ್ಯಲಾಗುತ್ತದೆ. ಅಲ್ಲಿ ಶಾಂತಿಪೂಜೆಯನು ಮಾಡಿ ಪೋತರಾಜನ ಬಗ್ಗೆ ಪುರಾಣಕತೆಗಳನ್ನು ಹೇಳಲಾಗುತ್ತದೆ. ಆಮೇಲೆ ಉತ್ಸವ ಗುಡಿಗೆ ಮರಳುತ್ತದೆ. ಇದಾದಮೇಲೆ ‘ಪೋತರಾಜ’ ಬಣದ ಪೂಜಾರಿಗಳ ಮನೆಗೆ ಹೋಗಿ ಪೂಜೆಯನ್ನು ಮಾಡಲಾಗುತ್ತದೆ. ಆಗ ಆ ಪೂಜಾರಿಗಳ ಮೈ ಮೇಲೆ ಪೋತರಾಜನು ಬಂದಂತಾಗಿ ಅವರು ನುಗ್ಗಿ ಬರುವರು. ಅವರನ್ನು ತಿಳಿಗೊಳಿಸಿ ಗುಡಿಗೆ ಕರೆದುಕೊಂಡು ಬರಲು ಕರಿಮೇಕೆಯನ್ನು ಕೊಡಲಾಗುತ್ತದೆ ಮತ್ತು ಮಂತ್ರಗಳನ್ನು ಹೇಳಲಾಗುತ್ತದೆ. ಆಗ ಪೋತರಾಜ ಪೂಜಾರಿಗಳು ಮೇಕೆಯನ್ನು ಬಾಯಿಂದ ಕಡಿದು ಅದರ ನೆತ್ತರನ್ನು ಹೀರಿ ಶಾಂತರಾಗುವರು. ಆಮೇಲೆ ಆರತಿಯೊಂದಿಗೆ ಗಾವುಸೇವೆ ಕೊನೆಗೊಳ್ಳುತ್ತದೆ

The eleventh day is the last day of the vratha. The karthas and veerakumaras will assemble near temple under the leadership of Gowda, Gnachar, Chakridaras at 4 pm As a mark of successful completion of the Karaga shakthyotsava function the vasanthotsava will be celebrated. The ancient games of aiming target, some time naked eyes, some time closed eyes. The ladies will bring turmeric water and fill the drums kept for the purpose. The youngsters throw the turmeric water on the opposite party to disturb their object beating. Totally the vasantha vuthsava ends with joy and happiness. The same day night 10:30 pm the uthsava of lord Arjuna and Draupadi will be conducted, and the Dwaaja Awarohana(Descending of the flag which as raised on first day of the Karagashakthyotsava) will be held. Pooja will be conducted to dwajadanda (flag poll) and Mahamangalarathi will be performed. The veerakumaras will unite their kankana and sacred threads and surrender the same to the temple. At the same time all the karthas and veerakumars under the leadership of the Kulagowda and Gantepoojari, take chakridaras and leave them to their respective houses respectfully. With this the eleven days Vrathacharana of colourful and flower full "Karagashakthyotsava" will come to an end.